Skip Ribbon Commands
Skip to main content
English
Sign In

ಹಿನ್ನೆಲೆ


ಕರ್ನಾಟಕ ರಾಜ್ಯವು ಯುವ ಜನತೆಯನ್ನು ಹೊಂದಿದ ರಾಜ್ಯವಾಗಿದೆಇದು ಉದ್ಯೋಗ ಹೊಂದುವ ಸಾಮಥ್ರ್ಯ, ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ವರ್ಧಿಸಲು ತನ್ನ ಮಾನವ ಶಕ್ತಿಯನ್ನು ಕೌಶಲ್ಯೀಕರಣಗೊಳಿಸುವುದರ ಮೂಲಕ 25 ವರ್ಷಗಳವರೆಗೆ ಜನಸಂಖ್ಯೆಯ ಪ್ರಯೋಜನವನ್ನು ಪಡೆಯುವ ಅವಕಾಶವನ್ನು ಒದಗಿಸಿದೆ. ಕರ್ನಾಟಕ ರಾಜ್ಯದಲ್ಲಿ ಕೌಶಲ್ಯೀಕರಣಕ್ಕಾಗಿ ವಿವಿಧ ಇಲಾಖೆಗಳ ಸಂಪನ್ಮೂಲಗಳು, ಸಾಂಸ್ಥಿಕ ಸಾಮರ್ಥ್ಯ, ಮತ್ತು ಕಾರ್ಯಕ್ರಮಗಳನ್ನು ಏಕೀಕರಣಗೊಳಿಸುವ ಸಲುವಾಗಿ ನಿಯಂತ್ರಣ, ಗುಣಮಟ್ಟ, ಪ್ರಮಾಣೀಕರಣ, ಪ್ರೋತ್ಸಾಹ, ಯೋಜನೆ ಮತ್ತು ಅನುಷ್ಠಾನ ಇತ್ಯಾದಿ ವಿಷಯಗಳ ಕುರಿತು ವ್ಯಾಪಕವಾದ ಪಾತ್ರವನ್ನು ಹೊಂದಿರುವ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿನ ಅತ್ಯುನ್ನತ ಕೌಶಲ್ಯ ಮಿಷನ್ನ್ನು ಹೊಂದಿದೆ.  ಇದು ಕೇಂದ್ರೀಕೃತ ಮತ್ತು ಸುಸ್ಥಿರ ಕೌಶಲ್ಯೀಕರಣ ಮತ್ತು ಉದ್ಯೋಗ ಹೊಂದುವ ಸಾಮರ್ಥ್ಯ ಸಲುವಾಗಿ ರಾಜ್ಯದ ಉಪಕ್ರಮಗಳನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನೀತಿಯೊಂದಿಗೆ ಹೊಂದಾಣಿಕೆಯನ್ನು ಮಾಡುತ್ತದೆ. ಅಲ್ಲದೆ ಕಾರ್ಯಕ್ರಮಗಳ ಪುನರಾವರ್ತನೆಯನ್ನು ತಪ್ಪಿಸುತ್ತದೆ. ಸಾಂಸ್ಥಿಕ ಸಾಮರ್ಥ್ಯಗಳಲ್ಲಿ ಪ್ರಬಲ ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಕೌಶಲ್ಯಾಭಿವೃದ್ಧಿಯ ಸಲುವಾಗಿ ಪೂರ್ಣ ಪ್ರಮಾಣದ ಅನುದಾನವುಳ್ಳ ಯೋಜನೆಗಳೊಂದಿಗೆ ಆರ್ಥಿಕತೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಔಪಚಾರಿಕ ಶಿಕ್ಷಣದಿಂದ ಹೊರಬರುವ ಯುವಕರು  ಉದ್ಯೋಗಕ್ಕೆ ಯೋಗ್ಯರನ್ನಾಗಿಸಲು ಅಥವಾ ಸ್ವಯಂ ಉದ್ಯೋಗ ಕೌಶಲ್ಯಗಳನ್ನು ಹೊಂದುವಂತಾಗುವುದನ್ನು ಖಾತರಿಪಡಿಸಲು ಕಡಿಮೆ ವಯಸ್ಸಿನ ಯುವಕರ ಕೌಶಲ್ಯೀಕರಣಕ್ಕಾಗಿ  ಉತ್ತಮ ಸೌಲಭ್ಯಗಳನ್ನು ಒದಗಿಸಲು ಮತ್ತು ಕಡಿಮೆ ವೇತನದ ಉದ್ಯೋಗಗಳಲ್ಲಿ ಮತ್ತು ಅನೌಪಚಾರಿಕ ವಲಯಗಳಲ್ಲಿ ಅಂಟಿಕೊಂಡಿರುವ ಜನರು ಉನ್ನತ ಕೌಶಲ್ಯೀಕರಣ / ಮರು ಕೌಶಲ್ಯೀಕರಣ ಮತ್ತು ಕಲಿಕಾಪೂರ್ವ ಮಾನ್ಯತೆಯ ಮೂಲಕ ಬೆಳವಣಿಗೆಯ ಅವಕಾಶಗಳನ್ನು ಪಡೆಯುವುದನ್ನು ಖಾತರಿಪಡಿಸಲು ಮಿಷನ್  ಕೈಗಾರಿಕೆ ಮತ್ತು ಮಾರುಕಟ್ಟೆಗಳನ್ನು ಮುಖಾಮುಖಿಯಾಗಿಸುತ್ತದೆ. ಇದು ಉತ್ಪಾದಕತೆಯನ್ನು  ಹೆಚ್ಚಿಸುವ ಮತ್ತು ಯುವಕರಿಗೆ ಕೌಶಲ್ಯೀಕರಣವು ಮಹತ್ವಾಕಾಂಕ್ಷೆಯನ್ನಾಗಿ ಮಾಡುವ ಸಲುವಾಗಿ ಕೈಗಾರಿಕಾ  ಕಾರ್ಯಪಡೆಯ ಪೂರೈಕೆ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ.

ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟನ್ನು ಪಾಲಿಸಲು ಮತ್ತು ವೃತ್ತಿ ಮತ್ತು ಸಾಮಾನ್ಯ ಶಿಕ್ಷಣ ನಡುವಿನ ಚಲನಶೀಲತೆಯನ್ನು ಉತ್ತೇಜಿಸಲು ಹಾಗೂ ಗುಣಮಟ್ಟ ಮತ್ತು ಸ್ಥಿರತೆಯಿಂದ ಜಾಗತಿಕ ಚಲನಶೀಲತೆಗೆ ವೇಗವನ್ನು ನೀಡಲು ಹೊಸ ಮಿಷನ್ ಶ್ರಮಿಸುವುದು ಮಿಷನ್ ಯಾವ ಇಲಾಖೆಯು ತುಲನಾತ್ಮಕ ಪ್ರಯೋಜನವನ್ನು ಹೊಂದಿಲ್ಲವೋ ಅಂತಹ ವಿವಿಧ ಇಲಾಖೆಗಳ ಕೌಶಲ್ಯೀಕರಣದ ಪಾತ್ರ ಮತ್ತು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದುಹೊರಗಿಡುವ ಮತ್ತು ಸೇರ್ಪಡೆಯ ತಪ್ಪುಗಳು ಮತ್ತು ಪುನರಾವರ್ತನೆಯನ್ನು ತಪ್ಪಿಸಲು ಮಿಷನ್ ರಾಜ್ಯದಲ್ಲಿ ಫಲಾನುಭವಿಗಳ ಆಯ್ಕೆ ಮತ್ತು ಎಲ್ಲಾ ಕೌಶಲ್ಯೀಕರಣ ಕಾರ್ಯಕ್ರಮಗಳ ಉಸ್ತುವಾರಿಯ ಜವಾಬ್ದಾರಿಯನ್ನು ಹೊಂದಿದೆ. 
Last modified at 3/15/2017 1:51 PM by System Account

Skill Skill Skill Skill Skill Skill

Content Owned and Maintained by : Skill Development Department, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.